Follow Us:
Call Us: +91 9886708073

ಸದ್ದಿಲ್ಲದೆ ಸೇವೆ ಮಾಡುವ ನಿಷ್ಕಳಂಕ ಸಮಾಜಮುಖಿ ನಾಯಕ ಡಾ| ಯು.ಟಿ.ಇಫ್ತಿಕಾರ್ ಅಲಿ ಫರೀದ್

ಸಮಾಜಸೇವೆ ಎಂಬ ಗುಣ ಮಾನವೀಯತೆಯ ಪ್ರತಿಬಿಂಬ ಎಂದೇ ಪ್ರಚಲಿತದಲ್ಲಿದೆ. ಅದು ಅಷ್ಟೊಂದು ಮಹತ್ವದ ಸೇವೆ. ಈ ಮಹನೀಯ ಸೇವೆಯನ್ನು ತನ್ನ ಬದುಕಾಗಿಸಿಕೊಂಡ ಎಲೆ ಮರೆ ಕಾಯಿಯ ಪ್ರತಿಭೆಯೇ ಯು.ಟಿ. ಇಫ್ತಿಕಾರ್ ಅಲಿ ! ತಾನು ರಾಜ್ಯದ ಸ್ಪೀಕರ್ ರವರ ತಮ್ಮ ಎಂಬ ಯಾವುದೇ ಹಮ್ಮುಬಿಮ್ಮಿಲ್ಲದೆ ಸದ್ದಿಲ್ಲದೆ ಸೇವೆ ಮಾಡುತ್ತಿರುವ ಈ ಯುವಕನನ್ನು ಇಡೀ ಸಮಾಜ ಸ್ವೀಕರಿಸಿದೆ ಎನ್ನುವುದಕ್ಕೆ ಅವರಿಗೆ ಸಮಾಜದಲ್ಲಿ ಜಾತಿ ಮತ ಬೇಧವಿಲ್ಲದೆ ಸಿಗುತ್ತಿರುವ ಸ್ವೀಕಾರರ್ಹತೆಯೇ ಜ್ವಲಂತ ನಿದರ್ಶನ !!!

ಸಮಾಜಸೇವೆ ಎಂದರೆ ತನ್ನೆಡೆಗೆ ಯಾವುದೇ ಲಾಭ ನಿರೀಕ್ಷಿಸದೇ, ಇತರರ ಹಿತಕ್ಕಾಗಿ ಕೆಲಸ ಮಾಡುವ ಕ್ರಿಯೆಯಾಗಿದೆ. ಇದು ಮಾನವೀಯತೆಯ ಶ್ರೇಷ್ಠ ಮಾದರಿಯಾಗಿದೆ.
ನಮ್ಮ ಸುತ್ತಲಿರುವ ಸಮಾಜದಲ್ಲಿ ಅನೇಕರು ನೆರವಿನ ಅಗತ್ಯವಿರುವವರಾಗಿದ್ದಾರೆ.
ಅಂತಹವರನ್ನು ಗುರುತಿಸಿ ಅವರಿಗೆ ಯಾವ ಸೇವೆ ಅಗತ್ಯವಿದೆಯೋ ಅವುಗಳನ್ನು ತನ್ನಿಂದಾದ ರೀತಿಯಲ್ಲಿ ಮಾಡಿ ಯು.ಟಿ.ಇಫ್ತಿಕಾರ್ ಅಲಿ ಮಾದರಿಯಾಗಿದ್ದಾರೆ. ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿ ಗಳಿಗೆ ಸಹಾಯ ಮಾಡುವ ಮೂಲಕ ನಾವು ಕೇವಲ ಅವರ ಜೀವನವನ್ನು ಸುಧಾರಿಸುವುದಲ್ಲದೆ, ಸಮಾಜದಲ್ಲಿಯ ಒಗ್ಗಟ್ಟನ್ನು ಹಾಗೂ ಸೌಹಾರ್ದತೆಯನ್ನು ಕಾಪಾಡಬಹುದು ಎಂಬುದಕ್ಕೆ ಡಾ ಯು.ಟಿ.ಇಫ್ತಿಕಾರ್ ಅಲಿ ಫರೀದ್ ಸಾಕ್ಷಿಯಾಗಿದ್ದಾರೆ. ಯಾವುದೇ ಪ್ರಚಾರ ಬಯಸದೆ ಅವರು ಮಾಡುವ ಸೇವೆಗಳನ್ನು ವರ್ಣಿಸಲು ಪದಗಳಿಲ್ಲ !

WhatsApp